ವಂಚನೆಯ ಕುರಿತಾದ ಸಲಹಾ

ಆತ್ಮೀಯ ಗ್ರಾಹಕರೇ,

ನಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ನಾವು ಇಂಟರ್ನೆಟ್ ಮೇಲೆ ಅವಲಂಬಿತರಾಗಿದ್ದೇವೆ. ಈ ಸೌಕರ್ಯದ ಜೊತೆಗೆ ಹಣಕಾಸಿನ ವಂಚನೆಗಳನ್ನು ಮಾಡಲು ಮೋಸಗಾರರು ಇಂಟರ್ನೆಟ್ ಬಳಸುವುದರಿಂದ ವಂಚಕರನ್ನು ಕೂಡ ಇದು ಹುಟ್ಟುಹಾಕುತ್ತದೆ.. ಇಂತಹ ವಂಚನೆಗಳಿಂದ ನಿಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ನಿಮಗೆ ತಿಳಿದಿರುವುದು ತುಂಬಾ ಪ್ರಾಮುಖ್ಯವಾಗಿದೆ.

ನೆನಪಿನಲ್ಲಿಡಬೇಕಾದ ಪ್ರಮುಖ ಸೂಚನೆಗಳು ಅಥವಾ ಅಂಶಗಳು

  • ಮಹೀಂದ್ರಾ ಅಂಡ್ ಮಹೀಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಎಂಎಂಎಫ್ಎಸ್ಎಲ್) ಸಂಸ್ಕರಣಾ ಶುಲ್ಕ/ಲಾಗಿನ್ ಶುಲ್ಕದ ಭಾಗವಾಗಿ ಯಾವುದೇ ನಗದು ಹಣವನ್ನು ಸಂಗ್ರಹಿಸುವುದಿಲ್ಲ ಮತ್ತು ಈ ಕಂಪೆನಿಯು ಈ ರೀತಿಯ ವಹಿವಾಟನ್ನು ಉತ್ತೇಜಿಸುವುದಿಲ್ಲ.
  • ಎಂಎಂಎಫ್ಎಸ್ಎಲ್ ಎಂದೂ ವೈಯಕ್ತಿಕ ಖಾತೆಗೆ ಹಣವನ್ನು ವರ್ಗಾಯಿಸುವಂತೆ ಗ್ರಾಹಕರಿಗೆ ಕೇಳಿಕೊಳ್ಳುವುದಿಲ್ಲ.
  • ಗೊತ್ತಿರದ ಮೂರನೇ ವ್ಯಕ್ತಿಗಳಿಂದ ಕಳುಹಿಸಲಾಗುವ ಲಿಂಕ್‌ಗಳು ಮತ್ತು ಲಗತ್ತುಗಳನ್ನು ತೆರೆಯುವಾಗ ತುಂಬಾ ಜಾಗರೂಕರಾಗಿರಿ.
  • ನಿಮ್ಮ ವೈಯಕ್ತಿಕ ದಾಖಲೆಗಳಾದ ಫೋಟೋ ಐಡಿ, ವಿಳಾಸದ ಪುರಾವೆ ಅಥವಾ ವೈಯಕ್ತಿಕ ಮಾಹಿತಿಯನ್ನು ಯಾವುದೇ ಅಪರಿಚಿತ ವ್ಯಕ್ತಿಯ ಕೈಗೆ ಒಪ್ಪಿಸಬೇಡಿ ಅಥವಾ ಅನುಮಾನಾಸ್ಪದ ಸೈಟ್‌ಗಳಲ್ಲಿ ಅವುಗಳನ್ನು ಹಂಚಿಕೊಳ್ಳಬೇಡಿ.

ಏನಾದರೂ ನಿಮಗೆ ಅನುಮಾನಾಸ್ಪದವಾಗಿ ಕಂಡುಬಂದರೆ ಅಥವಾ ಒಂದು ವಂಚನೆಯ ಬಗ್ಗೆ ನೀವು ವರದಿ ಮಾಡಲು ಬಯಸುವುದಾದರೆ, ದಯವಿಟ್ಟು [email protected] ನಲ್ಲಿ ನಮಗೆ ಬರೆಯಿರಿ ಅಥವಾ ನಮ್ಮ ಟೋಲ್-ಫ್ರೀ ಸಂಖ್ಯೆಯಲ್ಲಿ ನಮ್ಮನ್ನು ಸಂಪರ್ಕಿಸಿ

ನಮ್ಮ ಹತ್ತಿರದ ಶಾಖಾ ಆಫೀಸಿಗೆ ನೀವು ಭೇಟಿ ನೀಡಲು ಬಯಸುವಲ್ಲಿ (ನಮ್ಮ ಬ್ರಾಂಚ್ ಲೊಕೇಟರ್ mahindrafinance.com/branch-locator ಮೂಲಕ ಹತ್ತಿರದ ಶಾಖೆಯನ್ನು ನೀವು ಚೆಕ್ ಮಾಡಿ)

ಇದಲ್ಲದೆ, ನಮ್ಮ ಅಧಿಕೃತ ವೆಬ್‌ಸೈಟ್ www.mahindrafinance.com ಎಂಬುದನ್ನು ದಯವಿಟ್ಟು ಗಮನಿಸಿ. ಬೇರೆ ಹೆಸರುಗಳಿರುವ ವಂಚಕ ಅಥವಾ ನಕಲಿ ವೆಬ್‌ಸೈಟ್‌ಗಳ ಮೋಸಕ್ಕೆ ಬಲಿಯಾಗಬೇಡಿ.

ವಂಚನೆ ಸಲಹಾ ವರದಿ

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000

ಟಾಪ್
*