ಮಹಿಂದ್ರಾ ಫೈನಾನ್ಸ್ ನ ಬಗ್ಗೆ

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ (ಎಮ್‌ಎಮ್‌ಎಫ್ಎಸ್ಎಲ್), ಮಹಿಂದ್ರಾ ಮತ್ತು ಮಹಿಂದ್ರಾ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಪ್ರಾಥಮಿಕವಾಗಿ ಗ್ರಾಮೀಣ ಮತ್ತು ಅರೆ-ನಗರ ಮಾರುಕಟ್ಟೆಗಳ ಹಣಕಾಸಿನ ಅಗತ್ಯತೆಗಳಿಗೆ ಸಹಾಯ ಮಾಡುವ ಒಂದು ಬ್ಯಾಂಕೇತರ ಹಣಕಾಸು ಕಂಪನಿಯಾಗಿದೆ (ಎನ್‌ಬಿಎಫ್‌ಸಿ). ಕಂಪನಿಯು 1991ರಲ್ಲಿ ಮ್ಯಾಕ್ಸಿ ಮೋಟರ್ಸ್ ಫೈನಾನ್ಸಿಯಲ್ ಸರ್ವೀಸಸ್ ಲಿಮಿಟೆಡ್ ಹೆಸರಿನಲ್ಲಿ ಸ್ಥಾಪನೆಯಾಯಿತು ಮತ್ತು 1992ರಲ್ಲಿ ಅದರ ಈಗಿನ ಹೆಸರನ್ನು ಪಡೆದುಕೊಂಡಿತು. 1993ರಲ್ಲಿ, ಇದು ಮಹಿಂದ್ರಾ ಮತ್ತು ಮಹಿಂದ್ರಾ ಯುಟಿಲಿಟಿ ವಾಹನಗಳಿಗೆ ಸಾಲ ನೀಡಲಾರಂಭಿಸಿತು. 2002ರಲ್ಲಿ, ಇದು ಮಹಿಂದ್ರಾ ಅಲ್ಲದ ಮತ್ತು ಮಹಿಂದ್ರಾ ವಾಹನಗಳಿಗೆ ಸಾಲ ನೀಡಲಾರಂಭಿಸಿತು. ನಂತರ 2005ರಲ್ಲಿ, ಮಹಿಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ (ಎಮ್‌ಐಬಿಎಲ್) ಅನ್ನು ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯನ್ನಾಗಿ ಸೇರಿಸಿಕೊಳ್ಳುವ ಮೂಲಕ ಎಮ್‌ಎಮ್‌ಎಫ್ಎಸ್ಎಲ್ ವಿಮಾ ದಲ್ಲಾಳಿ ವ್ಯವಹಾರದಲ್ಲಿ ತೊಡಗಿಕೊಂಡಿತು. ಕಂಪನಿಯು 2006 ಮತ್ತು 2007ರಲ್ಲಿ ತನ್ನ ಐಪಿಒದೊಂದಿಗೆ ಹೊರಬಂದಿತು. ಆರ್‌ಬಿಐ ಇದನ್ನು 'ಆಸ್ತಿ ಹಣಕಾಸು ಕಂಪನಿ - ಠೇವಣಿ ತೆಗೆದುಕೊಳ್ಳುವುದು' ಎಂದು ವರ್ಗೀಕರಿಸಿದೆ. ಎಮ್‌ಎಮ್‌ಎಫ್‌ಎಸ್‌ಎಲ್‌ 2008ರಲ್ಲಿ ತನ್ನ ಅಂಗಸಂಸ್ಥೆಯಾದ ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮೂಲಕ ಗೃಹ ಸಾಲದ ವ್ಯವಹಾರಕ್ಕೆ ಪ್ರವೇಶಿಸಿತು. ಕಂಪನಿಯು 2010ರಲ್ಲಿ ವಾಣಿಜ್ಯ ವಾಹನಗಳು ಮತ್ತು ನಿರ್ಮಾಣ ಉಪಕರಣಗಳಿಗೆ ಸಾಲವನ್ನು ಪರಿಚಯಿಸಿತು.

33,000 ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಮಹೀಂದ್ರಾ ಫೈನಾನ್ಸ್, ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ತನ್ನ ಅಸ್ತಿತ್ವವನ್ನು ಹೊಂದಿದೆ ಮತ್ತು ಅದರ 85% ಜಿಲ್ಲೆಗಳಲ್ಲಿ ಹೆಜ್ಜೆ ಗುರುತುಗಳನ್ನು ಹೊಂದಿದೆ. ಇದು 1380 ಕ್ಕಿಂತಲೂ ಹೆಚ್ಚು ಆಫೀಸುಗಳ ನೆಟ್‌ವರ್ಕ್ ಹೊಂದಿದ್ದು, 3, 80,000 ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸುತ್ತಿದೆ – ಅಂದರೆ ದೇಶದ ಪ್ರತಿ ಎರಡು ಹಳ್ಳಿಗಳಲ್ಲಿ ಒಂದಕ್ಕೆ ಸೇವೆ ಸಲ್ಲಿಸುತ್ತಿದೆ. ಮತ್ತು 81,500 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಆಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್ (ಎಯುಎಮ್) ಅನ್ನು ಹೊಂದಿದೆ.

ಗ್ರಾಮೀಣ ಮತ್ತು ಅರೆ ನಗರ ವಲಯದ ಮೇಲೆ ಕೇಂದ್ರೀಕರಿಸಿರುವ ಕಂಪನಿಯು 5.1 ಮಿಲಿಯನ್ ಗ್ರಾಹಕರನ್ನು ಹೊಂದಿದೆ ಮತ್ತು 8.08 ಶತಕೋಟಿ ಡಾಲರ್‌ನಷ್ಟು ಎಯುಎಮ್‌ ಹೊಂದಿದೆ. ಕಂಪನಿಯು ಮುಂಚೂಣಿಯಲ್ಲಿರುವ ಪ್ರಮುಖ ವಾಹನ ಮತ್ತು ಟ್ರಾಕ್ಟರ್ ಸಾಲ ಒದಗಿಸುವ ತಜ್ಞನಾಗಿದೆ ಮತ್ತು ಎಸ್ಎಂಇಗಳಿಂದ ಸ್ಥಿರ ಠೇವಣಿಗಳು ಮತ್ತು ಸಾಲಗಳನ್ನು ಕೂಡ ನೀಡುತ್ತದೆ. ಕಂಪೆನಿ ದೇಶದಾದ್ಯಂತ 1,178 ಕಚೇರಿಗಳನ್ನು ಹೊಂದಿದೆ. ಮಹಿಂದ್ರಾ ಫೈನಾನ್ಸ್ ಬೆಳೆಯುತ್ತಿರುವ ಮಾರುಕಟ್ಟೆ ವಿಭಾಗದಲ್ಲಿ ಡೌ ಜೋನ್ಸ್ ಸುಸ್ಥಿರತೆ ಸೂಚ್ಯಂಕದಲ್ಲಿ ಭಾರತದಿಂದ ಆಯ್ಕೆಯಾದ ಕೇವಲ ಒಂದೇ ಒಂದು ಬ್ಯಾಂಕೇತರ ಹಣಕಾಸು ಕಂಪನಿಯಾಗಿದೆ. ಎಕನಾಮಿಕ್ಸ್‌ ಟೈಮ್ಸ್‌ನ ಸಹಯೋಗದೊಂದಿಗೆ ಗ್ರೇಟ್ ಪ್ಲೇಸ್ ಟು ವರ್ಕ್® (ಜಿಪಿಟಿಡಬ್ಲ್ಯು) ಸಂಸ್ಥೆಯಿಂದ ನೀಡಿದ ಅಗ್ರ 50 "ಭಾರತದಲ್ಲಿ 2017ಕ್ಕಾಗಿ ಕೆಲಸ ಮಾಡಲು ಉತ್ತಮವಾದ ಕಂಪನಿಗಳಲ್ಲಿ" 49ನೇ ಶ್ರೇಯಾಂಕವನ್ನು ಮಹಿಂದ್ರಾ ಫೈನಾನ್ಸ್ ಪಡೆದಿದೆ.

ಡೌ ಜೋನ್ಸ್ ಸಸ್ಟೈನಬಿಲಿಟಿ ಇಂಡೆಕ್ಸ್‌ ಇನ್ ಎಮರ್ಜಿಂಗ್ ಮಾರ್ಕೆಟ್ ಕೆಟಗರಿಯಲ್ಲಿ ಪಟ್ಟಿಮಾಡಲಾಗಿರುವ ಭಾರತದ ಏಕಮಾತ್ರ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಕಂಪೆನಿಯು ಮಹೀಂದ್ರಾ ಫೈನಾನ್ಸ್ ಆಗಿದೆ. ಗ್ರೇಟ್ ಪ್ಲೇಸ್ ಟು ವರ್ಕ್® ಇನ್‍ಸ್ಟಿಟ್ಯೂಟ್ ಇಂಡಿಯಾದಿಂದ ಬಿಎಫ್‌ಎಸ್‌ಐ, 2019 ರಲ್ಲಿ ಟಾಪ್ 20 ಇಂಡಿಯಾಸ್ ಬೆಸ್ಟ್ ವರ್ಕ್‌ಪ್ಲೇಸಸ್ ಟು ವರ್ಕ್‌ನಲ್ಲಿ ಮಹೀಂದ್ರಾ ಫೈನಾನ್ಸ್ ಸ್ಥಾನವನ್ನು ಪಡೆದಿದೆ. ಅಷ್ಟುಮಾತ್ರವಲ್ಲ, ಎಒಎನ್ ಬೆಸ್ಟ್ ಎಂಪ್ಲಾಯರ್ 2019 ಎಂದು ಸಹ ನಾವು ಮಾನ್ಯತೆ ಪಡೆದಿದ್ದೇವೆ ಮತ್ತು ಫ್ಯೂಚರ್‌ಸ್ಕೇಪ್‌ನಿಂದ ಜವಾಬ್ದಾರಿಯುತ ವ್ಯವಹಾರ ರ‍್ಯಾಂಕಿಂಗ್‌ಗಳು 2019ರ ಕೆಳಗೆ ಟಾಪ್ 100 ಇಂಡಿಯನ್ ಕಂಪೆನೀಸ್ ಫಾರ್ ಸಸ್ಟೈನಬಿಲಿಟಿ ಅಂಡ್ ಸಿಎಸ್‌ಆರ್-ನಲ್ಲಿ 49ನೇ ಸ್ಥಾನವನ್ನು ಗಳಿಸಿದ್ದೇವೆ. ಇನ್ನೂ ಹೆಚ್ಚನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಕಂಪೆನಿಯ ವಿಮೆ ಬ್ರೋಕಿಂಗ್ ಅಂಗಸಂಸ್ಥೆಯಾದ ಮಹಿಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ (ಎಮ್‌ಐಬಿಎಲ್), ಪರವಾನಗಿ ಪಡೆದ ನೇರ ಮತ್ತು ಮರುಪಾವತಿಯ ಬ್ರೋಕಿಂಗ್ ಸೇವೆಗಳನ್ನು ಒದಗಿಸುವ ಸಂಯೋಜಕ ಬ್ರೋಕರ್ ಆಗಿದೆ.

ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಮ್‌ಆರ್‌ಎಚ್‌ಎಫ್ಎಲ್) ಮಹಿಂದ್ರಾ ಫೈನಾನ್ಸ್‌ನ ಅಂಗಸಂಸ್ಥೆಯಾಗಿದ್ದು ದೇಶದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿನ ವ್ಯಕ್ತಿಗಳಿಗೆ ಮನೆಗಳ ಖರೀದಿ, ನವೀಕರಣ, ನಿರ್ಮಾಣಕ್ಕೆ ಸಾಲ ನೀಡುತ್ತದೆ.

ಮಹಿಂದ್ರಾ ಫೈನಾನ್ಸಿನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಮಹಿಂದ್ರಾ ಅಸೆಟ್ ಮ್ಯಾನೇಜ್‌ಮೆಂಟ್ ಕಂಪೆನಿ ಪ್ರೈವೇಟ್ ಲಿಮಿಟೆಡ್ (ಎಂಎಎಂಸಿಪಿಎಲ್), ಮಹಿಂದ್ರಾ ಮ್ಯೂಚುಯಲ್ ಫಂಡಿನ ಹೂಡಿಕೆ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದೆ.

ಅಮೆರಿಕದಲ್ಲಿ ಮಹಿಂದ್ರಾ ಟ್ರಾಕ್ಟರುಗಳಿಗೆ ಸಾಲ ಒದಗಿಸಲು, ರಾಬೋ ಬ್ಯಾಂಕಿನ ಅಂಗಸಂಸ್ಥೆಯಾದ ಡಿ ಲೇಜ್ ಲ್ಯಾಂಡೆನ್ ಸಹಯೋಗದೊಂದಿಗೆ, ಕಂಪೆನಿಯು ಯುಎಸ್, ಮಹಿಂದ್ರಾ ಫೈನಾನ್ಸ್ ಯುಎಸ್ಎ ಎಲ್ಎಲ್‌ಸಿಯಲ್ಲಿ ಜಂಟಿ ಸಹಭಾಗಿತ್ವವನ್ನು ಹೊಂದಿದೆ.

 

ವ್ಯಾವಹಾರಿಕ ಕಾರ್ಯಾಚರಣೆಗಳು

ದೇಶದ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ವಾಸಿಸುವ ದೊಡ್ಡ ಪ್ರಮಾಣದ ಜನಸಂಖ್ಯೆಯ ಹಣಕಾಸಿನ ಅಗತ್ಯತೆಗಳಿಗೆ ತಕ್ಕಂತೆ ವ್ಯಾಪಕವಾದ ಚಿಲ್ಲರೆ ಉತ್ಪನ್ನಗಳು ಮತ್ತು ಸೇವೆಗಳನ್ನು ಎಮ್‌ಎಮ್‌ಎಫ್‌ಎಸ್‌ಎಲ್‌ ಒದಗಿಸುತ್ತದೆ. ಇದರ ಕೊಡುಗೆಗಳನ್ನು ಕೆಳಗೆ ಪಟ್ಟಿ ಮಾಡಲಾಗಿರುವಂತೆ ಏಳು ವರ್ಗಗಳಾಗಿ ವಿಂಗಡಿಸಬಹುದು:

ವಾಹನ ಸಾಲ

  • ಯುಟಿಲಿಟಿ ವಾಹನ ಸಾಲಗಳು, ಕಾರು ಸಾಲಗಳು, ಮೂರು ಚಕ್ರದ ವಾಹನ ಸಾಲಗಳು, ದ್ವಿಚಕ್ರ ವಾಹನ ಸಾಲಗಳು ಮತ್ತು ವಾಣಿಜ್ಯ ವಾಹನ ಸಾಲಗಳು ಸೇರಿದಂತೆ ವಿವಿಧ ವಾಹನಗಳ ಸಾಲದ ಸೇವೆಗಳನ್ನು ಎಮ್‌ಎಮ್‌ಎಫ್ಎಸ್ಎಲ್ ಒದಗಿಸುತ್ತದೆ. ವಿಭಿನ್ನವಾದ ಗ್ರಾಹಕರ ಅಗತ್ಯಗಳನ್ನು ಪೂರೈಸಲು ವಿವಿಧ ಮರುಪಾವತಿ ಆಯ್ಕೆಗಳೊಂದಿಗೆ ವೈವಿಧ್ಯಮಯ ಯೋಜನೆಗಳ ಮೂಲಕ ಈ ಸಾಲಗಳನ್ನು ನೀಡಲಾಗುತ್ತದೆ.

ಟ್ರಾಕ್ಟರ್ ಸಾಲ:

  • ಗ್ರಾಹಕರ ನಗದು ಹರಿವಿಗೆ ತಕ್ಕಂತೆ ರಚಿಸಿರುವ ಯೋಜನೆಗಳು ಮತ್ತು ಮರುಪಾವತಿ ಆಯ್ಕೆಗಳೊಂದಿಗೆ ಗ್ರಾಮೀಣ ಜನರಿಗೆ ಟ್ರಾಕ್ಟರುಗಳನ್ನು ಖರೀದಿಸಲು ಎಮ್‌ಎಮ್‌ಎಫ್ಎಸ್ಎಲ್ ಸಾಲವನ್ನು ನೀಡುತ್ತದೆ.
  • >

ಪೂರ್ವ-ಮಾಲಿಕತ್ವದ ವಾಹನ ಸಾಲ:

  • 10 ವರ್ಷಗಳ ಒಳಗಿನ ಪೂರ್ವ -ಮಾಲೀಕತ್ವದ ಕಾರುಗಳು, ಬಹು-ಉಪಯುಕ್ತ ವಾಹನಗಳು, ಟ್ರಾಕ್ಟರುಗಳು ಮತ್ತು ವಾಣಿಜ್ಯ ವಾಹನಗಳ ಮೇಲೆ ಎಮ್‌ಎಮ್‌ಎಫ್‌ಎಸ್‌ಎಲ್‌ ಸಾಲ ನೀಡುತ್ತದೆ. ಇದು ಕಡಿಮೆ ಬಡ್ಡಿದರಗಳನ್ನು ಹೊಂದಿರುತ್ತದೆ ಮತ್ತು ವೇಗವಾದ ಸಾಲದ ವಿತರಣೆಗಳೊಂದಿಗೆ ಗರಿಷ್ಠ ನಮ್ಯತೆಯನ್ನು ಖಚಿತಪಡಿಸುತ್ತದೆ.

ಮನೆ ಸಾಲ:

  • ಕಂಪೆನಿಯು ತನ್ನ ಅಂಗಸಂಸ್ಥೆಯಾದ ಮಹಿಂದ್ರಾ ರೂರಲ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಎಮ್‌ಆರ್‌ಎಚ್‌ಎಫ್‌ಎಲ್‌) ಮೂಲಕ ಗ್ರಾಮೀಣ ಭಾರತದ ಮನೆ ಸಾಲದ ಅಗತ್ಯತೆಗಳನ್ನು ಪೂರೈಸುತ್ತದೆ. ಇದು ಗ್ರಾಮೀಣ ಮನೆಗಳಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸಲು ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ನೊಂದಿಗೆ (ಎನ್‌ಎಚ್‌ಬಿ) ಸಹಭಾಗಿಯಾಗಿದೆ. ಹೊಸ ಮನೆ ಖರೀದಿಗಾಗಿ ಮತ್ತು ನವೀಕರಣ ಮತ್ತು ಸುಧಾರಣೆಗಾಗಿ ಇದು ಮನೆ ಸಾಲಗಳನ್ನು ಒದಗಿಸುತ್ತದೆ.

ಎಸ್‌ಎಮ್‌ಇ ಸಾಲ:

  • ಆಟೋಮೊಬೈಲ್‌ಗಳು, ಸ್ವಯಂ ಪೂರಕ ಮತ್ತು ಆಹಾರ ಹಾಗೂ ಕೃಷಿ ಪ್ರಕ್ರಿಯೆ ಮುಂತಾದ ನಿರ್ದಿಷ್ಟ ಕ್ಷೇತ್ರಗಳ ಭಾಗವಾಗಿರುವ ಎಸ್ಎಂಇಗಳಿಗೆ ಎಮ್‌ಎಮ್‌ಎಫ್‌ಎಸ್‌ಎಲ್‌ ಸಹಾಯ ಮಾಡುತ್ತದೆ. ಇದು ಯೋಜನೆಯ ಸಾಲ, ಸಲಕರಣೆ ಸಾಲ, ಸಾಂಸ್ಥಿಕ ಸಾಲ, ಬಿಲ್ ರಿಯಾಯಿತಿ ಮತ್ತು ಬಂಡವಾಳ ಸಾಲವನ್ನು ಒಳಗೊಂಡಂತೆ ವಿವಿಧ ಉದ್ದೇಶಗಳಿಗಾಗಿ ಎಸ್ಎಂಇ ಸಾಲಗಳನ್ನು ನೀಡುತ್ತದೆ. ಮಹಿಂದ್ರಾ ಫೈನಾನ್ಸ್ ಎಸ್ಎಂಇ ಗಮನಾರ್ಹ ಗಾತ್ರದ ಸಾಲ ಖಾತೆಯನ್ನುನಿರ್ಮಿಸಿದೆ ಮತ್ತು ವೇಗವಾಗಿ ಬೆಳೆಯುತ್ತಿದೆ.

ವಿಮೆ ಬ್ರೋಕಿಂಗ್:

  • ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಮಹಿಂದ್ರಾ ಇನ್ಶುರೆನ್ಸ್ ಬ್ರೋಕರ್ಸ್ ಲಿಮಿಟೆಡ್ (ಎಮ್‌ಐಬಿಎಲ್‌) ಮೂಲಕ ಜೀವ ಮತ್ತು ಜೀವ ಹೊರತಾದ ವಿಮಾ ಸೌಲಭ್ಯಗಳನ್ನು ಎಮ್‌ಎಮ್‌ಎಫ್‌ಎಸ್‌ಎಲ್‌ ಒದಗಿಸುತ್ತದೆ. ಅದರ ಕೆಲವು ವೈಯಕ್ತಿಕ ವಿಮಾ ಉತ್ಪನ್ನಗಳೆಂದರೆ ಮೋಟಾರು ವಿಮೆ, ಆರೋಗ್ಯ ವಿಮೆ, ಪ್ರಯಾಣ ವಿಮೆ, ಮನೆ ವಿಮೆ ಮತ್ತು ವೈಯಕ್ತಿಕ ಅಪಘಾತ ವಿಮೆ ಆಗಿವೆ; ಸಾಂಸ್ಥಿಕ ವಿಮೆಯು ಗುಂಪು ಮೆಡಿಕ್ಲೈಮ್ ಪಾಲಿಸಿ, ಗುಂಪು ವೈಯಕ್ತಿಕ ಅಪಘಾತ ಪಾಲಿಸಿ, ಬೆಂಕಿ ಮತ್ತು ಕಡಲ ವಿಮೆ ಮತ್ತು ಕಚೇರಿ ಪ್ಯಾಕೇಜ್ ವಿಮೆ ಹಾಗೂ ಇತರೆಯನ್ನು ಒಳಗೊಂಡಿದೆ.

ಹೂಡಿಕೆ ಮತ್ತು ಸಲಹೆ:

  • ಮ್ಯೂಚುವಲ್ ಫಂಡ್‌ಗಳು: ಎಮ್‌ಎಮ್‌ಎಫ್‌ಎಸ್‌ಎಲ್‌ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮಹಿಂದ್ರಾ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ ಪ್ರೈವೇಟ್ ಲಿಮಿಟೆಡ್ (ಎಮ್‌ಎಎಮ್‌ಸಿಪಿಎಲ್‌) ಮೂಲಕ ಗ್ರಾಮೀಣ ಮತ್ತು ಅರೆ-ನಗರದ ಗ್ರಾಹಕರಿಗೆ ಮ್ಯೂಚುಯಲ್ ಫಂಡ್ ಉತ್ಪನ್ನಗಳನ್ನು ಒದಗಿಸುತ್ತದೆ. ಮ್ಯೂಚುವಲ್ ಫಂಡ್ ಉತ್ಪನ್ನಗಳನ್ನು ಮಹಿಂದ್ರಾ ಮ್ಯೂಚುವಲ್ ಫಂಡ್ ಎಂಬ ಬ್ರಾಂಡ್ ಹೆಸರಿನಲ್ಲಿ ನೀಡುತ್ತದೆ.
  • ಸ್ಥಿರ ಠೇವಣಿಗಳು: ಎಮ್‌ಎಮ್‌ಎಫ್‌ಎಸ್‌ಎಲ್‌ ಸ್ಥಿರ ಠೇವಣಿ ಹೂಡಿಕೆ ಯೋಜನೆಗಳನ್ನು ವಿವಿಧ ಬಡ್ಡಿದರಗಳಲ್ಲಿ ನೀಡುತ್ತದೆ ಮತ್ತು ಸಂಚಿತ ಮತ್ತು ಸಂಚಿತವಲ್ಲದ ಆಯ್ಕೆಗಳನ್ನು ನೀಡುತ್ತದೆ.
  • ಸಲಹಾ ಸೇವೆಗಳು: ಆದಾಯದ ಸಾಮರ್ಥ್ಯ ಮತ್ತು ಪ್ರಸ್ತುತ ಹೂಡಿಕೆ ಮಾದರಿಗಳ ಆಧಾರದ ಮೇಲೆ ಹಣಕಾಸಿನ ಅಗತ್ಯತೆಗಳನ್ನು ವಿಶ್ಲೇಷಿಸಿ ಕಂಪೆನಿಯು ತನ್ನ ಗ್ರಾಹಕರಿಗೆ ಹಲವಾರು ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಬಂಡವಾಳ ಹೂಡಿಕೆ ಸಲಹಾ ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು "ಮಹಿಂದ್ರಾ ಫೈನಾನ್ಸ್ ಫಿನ್‌ಸ್ಮಾರ್ಟ್‌" ಎಂಬ ಬ್ರಾಂಡ್‌ನ ಅಡಿಯಲ್ಲಿ ಎಎಮ್‌ಎಫ್‌ಐ ಪ್ರಮಾಣೀಕೃತ ವೃತ್ತಿಪರರ ಮೂಲಕ ಹಣ ಹೂಡಿಕೆ ಮಾಡಲು ಗ್ರಾಹಕರಿಗೆ ಸಲಹೆ ಸೇವೆಗಳನ್ನು ನೀಡುತ್ತದೆ.

ಕೋರ್ ಮೌಲ್ಯಗಳು

ನಮ್ಮ ಮೂಲ ಮೌಲ್ಯಗಳು ನಮ್ಮ ವೈಯಕ್ತಿಕ ಮತ್ತು ಸಾಂಸ್ಥಿಕ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಈ ಮೌಲ್ಯಗಳು ಭೂತ ಸ್ಥಿತಿಯಿಂದ ಪ್ರಭಾವಿತವಾಗಿವೆ ಮತ್ತು ವಾಸ್ತವದಿಂದ ಬದಲಾಯಿಸಲ್ಪಟ್ಟಿವೆ, ಮತ್ತು ಇದು ನಮ್ಮ ಭವಿಷ್ಯವನ್ನು ರೂಪಿಸುತ್ತವೆ. ಅವು ನಾವು ಏನಾಗಿದ್ದೇವೆ ಮತ್ತು ನಾವು ಏನಾಗಲು ಬಯಸಿದ್ದೇವೆ ಎಂಬುದರ ಮಿಶ್ರಣವಾಗಿವೆ.

ಯಾವಾಗಲೂ
ಗ್ರಾಹಕರಿಗೆ ಮೊದಲ
ಆದ್ಯತೆ ನೀಡುವುದು

ನಮ್ಮ ಗ್ರಾಹಕರಿಂದಲೇ ನಮ್ಮ ಅಸ್ತಿತ್ವ ಮತ್ತು ಅವರಿಂದಲೇ ನಾವು ಪ್ರಗತಿ ಸಾಧಿಸುತ್ತೇವೆ. ನಾವು ಯಾವಾಗಲೂ ನಮ್ಮ ಗ್ರಾಹಕರ ಬದಲಾಗುತ್ತಿರುವ ಅಗತ್ಯತೆಗಳಿಗೆ ಮತ್ತು ನಿರೀಕ್ಷೆಗಳಿಗೆ ವೇಗವಾಗಿ, ವಿನಯಪೂರ್ವಕವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುತ್ತೇವೆ.

ಗುಣಮಟ್ಟ ಕೇಂದ್ರಿತ

ನಮ್ಮ ಗ್ರಾಹಕರಿಗೆ ಹಣದ ಉತ್ಪನ್ನಗಳು ಮತ್ತು ಸೇವೆಗಳಿಗೆ ಮೌಲ್ಯವನ್ನು ಒದಗಿಸುವಲ್ಲಿ ಗುಣಮಟ್ಟವು ಪ್ರಮುಖ ಅಂಶವಾಗಿದೆ. ನಮ್ಮ ಕೆಲಸಗಳಲ್ಲಿ, ನಮ್ಮ ಉತ್ಪನ್ನಗಳಲ್ಲಿ ಮತ್ತು ಗ್ರಾಹಕರು, ಉದ್ಯೋಗಿಗಳು ಮತ್ತು ಮಧ್ಯಸ್ಥಗಾರರೊಂದಿಗಿನ ನಮ್ಮ ಸಂವಹನಗಳಲ್ಲಿ ಗುಣಮಟ್ಟವನ್ನು ಒಂದು ಪ್ರಮುಖ ಮೌಲ್ಯವನ್ನಾಗಿ ನಾವು ಪರಿಗಣಿಸುತ್ತೇವೆ. ನಾವು 'ಮೊದಲ ಬಾರಿಯೇ ಪರಿಪೂರ್ಣತೆ' ಸಿದ್ಧಾಂತದಲ್ಲಿ ನಂಬಿಕೆ ಇಡುತ್ತೇವೆ.

ವೃತ್ತಿಪರತೆ

ನಾವು ಯಾವಾಗಲೂ ಉದ್ಯೋಗಕ್ಕೆ ಉತ್ತಮ ಜನರನ್ನು ಹುಡುಕುತ್ತೇವೆ ಮತ್ತು ಅವರಿಗೆ ಬೆಳೆಯಲು ಸ್ವಾತಂತ್ರ್ಯವನ್ನು ಮತ್ತು ಅವಕಾಶವನ್ನು ನೀಡುತ್ತೇವೆ. ನಾವೀನ್ಯತೆ, ಸೂಕ್ತ ಸಾಮರ್ಥ್ಯದ, ರಿಸ್ಕ್‌ ತೆಗೆದುಕೊಳ್ಳುವ ಮತ್ತು ಬೇಡಿಕೆ ಕಾರ್ಯಕ್ಷಮತೆಯನ್ನು ನಾವು ಬೆಂಬಲಿಸುತ್ತೇವೆ.

ಉತ್ತಮ
ಕಾರ್ಪೊರೇಟ್‌ ಪೌರತ್ವ

ಹಿಂದಿನಂತೆಯೇ, ನಮ್ಮ ದೇಶದ ಅಗತ್ಯತೆಗಳೊಂದಿಗೆ ಸರಿಹೊಂದುವಂತಹ ದೀರ್ಘಾವಧಿಯ ಯಶಸ್ಸನ್ನು ಸಾಧಿಸುವತ್ತ ನಾವು ಮುಂದುವರಿಸುತ್ತೇವೆ. ನೈತಿಕ ವ್ಯಾವಹಾರಿಕ ಗುಣಮಟ್ಟದೊಂದಿಗೆ ರಾಜಿ ಮಾಡಿಕೊಳ್ಳದೇ ನಾವು ಇದನ್ನು ಮಾಡುತ್ತೇವೆ.

ವೈಯಕ್ತಿಕ
ಘನತೆ ಗೌರವಿಸುವುದು

ನಾವು ವೈಯಕ್ತಿಕ ಘನತೆಯನ್ನು ಗೌರವಿಸುತ್ತೇವೆ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಲು ಮತ್ತು ಇತರರ ಸಮಯ ಮತ್ತು ಪ್ರಯತ್ನಗಳಿಗೆ ಗೌರವ ನೀಡುತ್ತೇವೆ. ನಮ್ಮ ಕೆಲಸಗಳ ಮೂಲಕ, ನಾವು ನ್ಯಾಯೋಚಿತತೆ, ನಂಬಿಕೆ ಮತ್ತು ಪಾರದರ್ಶಕತೆಗಳನ್ನು ಪ್ರೋತ್ಸಾಹಿಸುತ್ತೇವೆ.

ಸಾಮರ್ಥ್ಯ

ಭಾರತದಲ್ಲಿ ನಾವು ಪ್ರಮುಖವಾದ ಬ್ಯಾಂಕೇತರ ಹಣಕಾಸು ಕಂಪೆನಿಗಳಲ್ಲಿ ಒಂದಾಗಿರುವುದು ಒಂದು ಆಕಸ್ಮಿಕ ಸಂಗತಿಯಲ್ಲ. ಸ್ಪಷ್ಟವಾದ ಮುಂದಾಲೋಚನೆ ಮತ್ತು ಗಮನಾರ್ಹ ಪ್ರಯತ್ನವು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಷ್ಟೇ ಅಲ್ಲದೆ, ನಾವು ವಿಶೇಷವಾಗಿ ಕಾಣುವಂತೆ ಮಾಡಲು ಮತ್ತು ಹೆಚ್ಚಿನ ಶಕ್ತಿ ಹಾಗೂ ಆತ್ಮವಿಶ್ವಾಸದೊಂದಿಗೆ ನಾವು ಮುಂದುವರೆಯಲು ಸಹಾಯ ಮಾಡಿತು.

ಬಲವಾದ ಉದ್ಯೋಗಿಗಳು

ನಾವು ಸಾಮರ್ಥ್ಯವನ್ನು ಹೊಂದಿರುವುದಷ್ಟೇ ಅಲ್ಲದೆ ಸಾಮಾಜಿಕ ಪರಿಸರ ಮತ್ತು ಪರಿಸ್ಥಿತಿಗಳ ಬಗ್ಗೆ ಅರಿವಿರುವ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುತ್ತೇವೆ. ಹೀಗಾಗಿ, ತಮ್ಮ ಸ್ಥಳೀಯ ಜ್ಞಾನದ ಸಹಾಯದಿಂದ ಅವರು ಗ್ರಾಹಕರಿಗೆ ಉತ್ತಮವಾಗಿ ಸಹಾಯ ಮಾಡಬಹುದು. ನಮ್ಮೊಂದಿಗೆ ವ್ಯವಹರಿಸುವವರಿಗೆ ಸರಿಹೊಂದುವ ಸಂಬಂಧಗಳನ್ನು ನಾವು ನಿರ್ವಹಿಸುತ್ತೇವೆ, ಇದು ನಮ್ಮ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಪೂರ್ವಭಾವಿಯಾಗಿ ಮತ್ತು ಪರಿಣಾಮಕಾರಿಯಾಗಿರುವಂತೆ ಮಾಡುತ್ತದೆ.

ಸಂಚಿತ ಆಳ ಜ್ಞಾನ

ಉದ್ಯಮದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ನಾವು ಗ್ರಾಮೀಣ ಮತ್ತು ಅರೆ-ನಗರ ಮಾರುಕಟ್ಟೆಗಳ ಸಮಗ್ರ ಗ್ರಹಿಕೆಯನ್ನು ಹೊಂದಿದ್ದೇವೆ. ಈ ಜ್ಞಾನವು ನಮ್ಮ ಗ್ರಾಹಕರ ನಿರ್ದಿಷ್ಟ ಅಗತ್ಯತೆಗಳಿಗೆ ತಕ್ಕಂತೆ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ವಿತರಿಸಲು ನಮಗೆ ಸಹಾಯ ಮಾಡುತ್ತದೆ. ನಮ್ಮ ಗ್ರಾಹಕರ ಪ್ರಸ್ತುತ ಸ್ಥಿತಿಗೆ ಬದಲಾಗಿ ಭವಿಷ್ಯದ ಮರುಪಾವತಿ ಸಾಮರ್ಥ್ಯಗಳನ್ನು ಆಧರಿಸಿ ಸಾಲಗಳನ್ನು ನೀಡುವ ಕೆಲವು ವ್ಯಕ್ತಿಗಳಲ್ಲಿ ನಾವು ಕೂಡ ಒಬ್ಬರಾಗಿರುವುದು ಇದೇ ಕಾರಣಕ್ಕಾಗಿ.

ಪ್ರಬಲ ವ್ಯವಹಾರ ಮಾದರಿ

ಮೂಲ ಹಂತದಿಂದಲೇ ಕೌಶಲಗಳನ್ನು ಅಭಿವೃದ್ಧಿಪಡಿಸಲು ಇದು ನಮ್ಮ ನಿರಂತರ ಪ್ರಯತ್ನವಾಗಿದೆ. ಈ ಸ್ಪೂರ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು 20,000ಕ್ಕಿಂತಲೂ ಹೆಚ್ಚು ಜನರಿಗೆ ಉದ್ಯೋಗವನ್ನು ಒದಗಿಸುತ್ತೇವೆ ಮತ್ತು ಅವರಿಗೆ ಬೆಳೆಯಲು ಸಹಾಯ ಮಾಡುತ್ತೇವೆ.

ಬೃಹತ್ ಗ್ರಾಹಕ ಮೂಲ

4 ದಶಲಕ್ಷಕ್ಕೂ ಹೆಚ್ಚಿನ ತೃಪ್ತಿಕರ ಗ್ರಾಹಕರನ್ನು ಒಳಗೊಂಡ ನಮ್ಮ ಬೃಹತ್ ಮತ್ತು ನಿರಂತರವಾಗಿ ಬೆಳೆಯುತ್ತಿರುವ ಗ್ರಾಹಕ ಮೂಲದಲ್ಲಿ ನಮ್ಮ ಮಹಾನ್ ಶಕ್ತಿ ಅಡಗಿದೆ. ಗ್ರಾಮೀಣ ಮತ್ತು ಅರೆ-ನಗರ ಭಾರತದ ಜೀವನ ಮಟ್ಟವನ್ನು ವರ್ಧಿಸಲು ನಮ್ಮ ನಿರಂತರ ಸಮರ್ಪಣೆಗೆ ಅವು ಪ್ರಮಾಣಗಳಾಗಿವೆ.

ಪ್ರಬಲ ಪಾಲಕರು

ಮಹೀಂದ್ರ ಗ್ರೂಪ್‌ನ ಪೋಷಣೆ ಮತ್ತು ದೇಶಾದ್ಯಂತ ವಿತರಕರೊಂದಿಗಿನ ನಿಕಟ ಸಂಬಂಧದಿಂದ ನಾವು ಪ್ರತಿಸ್ಪರ್ಧಿಗಳಿಗಿಂತ ಮುಂಚೂಣಿಯಲ್ಲಿದ್ದೇವೆ.

ಗ್ರಾಹಕ ಕೇಂದ್ರಿತ ಪ್ರಕ್ರಿಯೆಗಳು

ವೇಗದ ಸಾಲ ಬಟವಾಡೆ ಪ್ರಕ್ರಿಯೆಯು ನಮ್ಮ ಅತ್ಯಂತ ಪ್ರಮುಖ ಸ್ವತ್ತುಗಳಲ್ಲಿ ಒಂದಾಗಿದೆ. ಕನಿಷ್ಠ ದಾಖಲೆ ಮತ್ತು ಹೆಚ್ಚಿನ ನಮ್ಯತೆಯೊಂದಿಗೆ, ನಮ್ಮ ಸಾಲಗಳನ್ನು ಸಾಮಾನ್ಯವಾಗಿ 2 ದಿನಗಳ ಅವಧಿಯ ಒಳಗೆ ಬಟವಾಡೆ ಮಾಡಲಾಗುತ್ತದೆ. ಸಾಲದ ಮರುಪಾವತಿಯ ವಿಷಯಕ್ಕೆ ಬಂದಾಗ, ಗರಿಷ್ಠ ನಮ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ಮರುಪಾವತಿಯ ವೇಳಾಪಟ್ಟಿಯನ್ನು ನಾವು ರಚಿಸಿದ್ದೇವೆ.

ವ್ಯಾಪಕ ಜಾಲ

1380 ಕ್ಕೂ ಹೆಚ್ಚಿನ ಶಾಖೆಗಳ ನಮ್ಮ ವ್ಯಾಪಕವಾದ ಜಾಲವು ದೇಶಾದ್ಯಂತ ನೀವು ಎಂದಿಗೂ ಮಹೀಂದ್ರ ಫೈನಾನ್ಸ್ ಶಾಖೆಯಿಂದ ದೂರವಿರುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಮೂಲ ತತ್ವ

Rise Philosophy

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

  • Diverse loan offerings
  • Less documenation
  • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000