ನ್ಯಾಯಯುತ ಅಭ್ಯಾಸದ ಸಂಕೇತ (ಫೇರ್ ಪ್ರಾಕ್ಟೀಸ್ ಕೋಡ್)

ಸಾಲಕ್ಕಾಗಿ ಅರ್ಜಿ ಮತ್ತು ಅವುಗಳ ಪ್ರಕ್ರಿಯೆ

 • ಎಂಎಂಎಫ್‌ಎಸ್‌ಎಲ್‌ನಿಂದ ಸಾಲವನ್ನು ಪಡೆಯಲು ಆಸಕ್ತಿಯನ್ನು ತೋರಿಸಿರುವ ಗ್ರಾಹಕರು ಸಾಲದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು, ಎಲ್ಲಾ ಅಂಶಗಳನ್ನೂ ಪೂರ್ಣಗೊಳಿಸಬೇಕು ಮತ್ತು ಅದನ್ನು ಕಂಪೆನಿಯ ಹತ್ತಿರದ ಶಾಖೆಗೆ ಸಲ್ಲಿಸಬೇಕು.
 • ಹೀಗೆ ಸಲ್ಲಿಸಲಾದ ಅರ್ಜಿಯನ್ನು ಕಂಪೆನಿಯು ಕೂಡಲೇ ಸ್ವೀಕರಿಸಿ ಅಂಗೀಕರಿಸುತ್ತದೆ ಮತ್ತು ಅರ್ಜಿಯನ್ನು ಸಾಲದ ಮಂಜೂರಾತಿಗಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. ಸಲ್ಲಿಸಲಾದ ಎಲ್ಲಾ ದಾಖಲೆಪತ್ರಗಳನ್ನು ಮತ್ತು ನೀಡಲಾದ ಎಲ್ಲಾ ಮಾಹಿತಿಯನ್ನು ಕಂಪೆನಿಯು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ, ಗ್ರಾಹಕರ ಸಾಲ ಪಡೆಯುವ ಅರ್ಹತೆಯನ್ನು ಪರೀಕ್ಷಿಸಿ ನೋಡುತ್ತದೆ ಮತ್ತು ತನ್ನ ಸ್ವಂತ ವಿವೇಚನೆಗನುಸಾರ ಈ ಪ್ರಸ್ತಾಪವನ್ನು ಮೌಲ್ಯಮಾಪನ ಮಾಡುತ್ತದೆ. ಹಾಗೂ ಸಾಲದ ಅರ್ಜಿಯನ್ನು ಸ್ವೀಕರಿಸಿದ ದಿನಾಂಕದಿಂದ 10 ದಿನಗಳೊಳಗೆ ಮಂಜೂರಾತಿ ಪತ್ರವನ್ನು ನೀಡುವ ಮೂಲಕ ಸಾಲವನ್ನು ಜಾರಿಗೊಳಿಸುತ್ತದೆ. ಒಂದು ವೇಳೆ ಕಂಪೆನಿಯು ಗ್ರಾಹಕರೊಂದಿಗೆ ಯಾವುದೇ ರೀತಿಯ ಸಂವಹನ ಅಥವಾ ವ್ಯವಹಾರ-ಸಂಪರ್ಕ ನಡೆಸದೇ ಇದ್ದಲ್ಲಿ, ಸಾಲದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪರಿಗಣಿಸಬೇಕಾಗುತ್ತದೆ ಮತ್ತು ತಿರಸ್ಕರಿಸಲಾದ ಅರ್ಜಿಗಳ ವಿಷಯದಲ್ಲಿ ಕಂಪೆನಿಯು ಯಾವುದೇ ಸಂವಹನವನ್ನು ಕಳುಹಿಸಲಾಗುವುದಿಲ್ಲ.
 • ಸಾಧ್ಯವಾದಷ್ಟು ಶ್ರಮಶೀಲತೆಯ ನಂತರ ಯಾರ ಸಾಲಗಳನ್ನು ಮಂಜೂರು ಮಾಡಲಾಗಿದೆಯೋ ಆ ಎಲ್ಲಾ ಸಾಲಗಾರರಿಗೆ ಸ್ಥಳೀಯ ಭಾಷೆಯಲ್ಲಿ ಮಂಜೂರಾತಿ ಪತ್ರವನ್ನು ಜಾರಿಗೊಳಿಸಬೇಕು.

ಸಾಲದ ಮೌಲ್ಯಮಾಪನ ಮತ್ತು ನಿಯಮಗಳು ಮತ್ತು ಷರತ್ತುಗಳು

 • ಸ್ಥಳೀಯ ಭಾಷೆಯ ಮಂಜೂರಾತಿ ಪತ್ರವು ಈ ಕೆಳಗಿನ ವಿಷಯಗಳನ್ನು ತಿಳಿಸುತ್ತದೆ:
  • ಫೈನಾನ್ಸ್ ಮಾಡಲಾದ ಮೊತ್ತ,
  • ಸಾಲದ ಬಟವಾಡೆಗಾಗಿ ಸಲ್ಲಿಸಬೇಕಾಗಿರುವ ದಾಖಲೆಗಳು,
  • ಬಡ್ಡಿಯ ದರ,
  • ನೀಡಬೇಕಾದ ಸೆಕ್ಯುರಿಟಿಯ (ಭದ್ರತಾ ಆಧಾರಪತ್ರ) ವಿವರಗಳು,
  • ಮರುಪಾವತಿ ವೇಳಾಪಟ್ಟಿ
  • ದಂಡ ಬಡ್ಡಿ ಅಥವಾ ವಿಳಂಬ ಪಾವತಿ ಶುಲ್ಕಗಳು (ವಾಯಿದೆ ದಿನಗಳನ್ನೂ ಮೀರಿ ಕಂತುಗಳ ಪಾವತಿಯಲ್ಲಿ ವಿಳಂಬವಾಗುವುದಾದರೆ)
  • ಸಾಲದ ಬಟವಾಡೆಗಾಗಿ ಜಾಮೀನುದಾರರು ಮತ್ತು ಸಹ-ಸಾಲಗಾರರು ನೀಡಬೇಕಾದ ದಾಖಲೆ.
  • ಮಂಜೂರಾತಿ ಪತ್ರದ ನಕಲನ್ನು ಪಡೆದುಕೊಳ್ಳಬೇಕು. ಗ್ರಾಹಕರು ತಾವು ಸರಿಯಾಗಿ ಸ್ವೀಕರಿಸಿದ ಮಂಜೂರಾತಿ ಪತ್ರದ ಒಂದು ಪ್ರತಿಯನ್ನು ಸ್ವೀಕರಿಸಿದ್ದಕ್ಕೆ ಸಂಕೇತವಾಗಿ ಕಂಪೆನಿಗೆ ಹಿಂತಿರುಗಿಸಬೇಕಾಗುತ್ತದೆ. ಇದಾದ ನಂತರ ಕಂಪೆನಿಯು ಡೀಲರ್ ಅಥವಾ ಗ್ರಾಹಕರ ಹೆಸರಿಗೆ, ಯಾರಿಗೆ ಸಂದಾಯವಾಗಬೇಕೊ ಅವರ ಹೆಸರಿಗೆ ಡಿ.ಒ./ಚೆಕ್ ಅನ್ನು ನೀಡುತ್ತದೆ.
 • ಈಗಾಗಲೇ ಇರುವ ಸಾಲದ ಒಪ್ಪಂದವು ವಿಳಂಬವಾದ ಪಾವತಿ ಶುಲ್ಕಗಳಿಗೆ ಒಂದು ಉಪವಾಕ್ಯ ಅಥವಾ ವಾಕ್ಯಾಂಶವನ್ನು ನೀಡುತ್ತದೆಯಾದರೂ, ಸೂಚಿಸಲಾದಂತೆ ಅದು ದಪ್ಪ ಅಕ್ಷರಗಳಲ್ಲಿ ಇರುವುದಿಲ್ಲ. ಭವಿಷ್ಯದಲ್ಲಿ ಎಲ್ಲಾ ಸಾಲದ ಒಪ್ಪಂದಗಳು ಈ ಉಪವಾಕ್ಯವನ್ನು ದಪ್ಪ ಅಕ್ಷರಗಳಲ್ಲಿ ನಮೂದಿಸುತ್ತವೆ.

ನಿಯಮಗಳು ಮತ್ತು ಷರತ್ತುಗಳಲ್ಲಿ ಬದಲಾವಣೆಗಳು ಸೇರಿದಂತೆ ಸಾಲಗಳ ಬಟವಾಡೆ

 • ಬಡ್ಡಿದರ, ಅವಧಿ, ಎಲ್ಲಾ ಶುಲ್ಕಗಳು/ಫೀಸುಗಳಲ್ಲಿನ ಬದಲಾವಣೆಯಂತಹ ನಿಯಮಗಳು ಮತ್ತು ಷರತ್ತುಗಳಲ್ಲಿನ ಯಾವುದೇ ಬದಲಾವಣೆಯನ್ನು ಸಾಲಗಾರರಿಗೆ ಸ್ಥಳೀಯ ಭಾಷೆಯಲ್ಲಿ ಲಿಖಿತ ರೂಪದಲ್ಲಿ ತಿಳಿಯಪಡಿಸಲಾಗುತ್ತದೆ.
 • ಪಾವತಿಯನ್ನು ಹಿಂತೆಗೆದುಕೊಳ್ಳುವ, ತ್ವರಿತಗೊಳಿಸುವ ಯಾವುದೇ ನಿರ್ಧಾರವನ್ನು ಒಪ್ಪಂದದ ನಿಯಮಗಳ ಪ್ರಕಾರ ಲೀಖಿತ ರೂಪದಲ್ಲಿ ಸಾಲಗಾರರಿಗೆ ತಿಳಿಯಪಡಿಸಲಾಗುತ್ತದೆ.
 • ಎಲ್ಲಾ ಬಾಕಿಗಳನ್ನು ವಸೂಲಿ ಮಾಡಿದ ನಂತರ ಎನ್‌ಒಸಿ ಅನ್ನು ಜಾರಿಗೊಳಿಸತಕ್ಕದ್ದು. ಮೇಲಾಧಾರ ಇದ್ದರೆ, ಯಾವುದಾದರೂ, ಅದನ್ನು ಎನ್‌ಒಸಿ ಜೊತೆಗೆ ಬಿಡುಗಡೆ ಮಾಡಲಾಗುತ್ತದೆ. ಒಪ್ಪಂದದ ಕಾರ್ಯಕ್ಷಮತೆಯನ್ನು ಖಾತ್ರಿಪಡಿಸಲು ತೆಗೆದುಕೊಳ್ಳಲಾಗುವ ಯಾವುದೇ ಮೇಲಾಧಾರವನ್ನು ಒಪ್ಪುವಂತೆ ಅಂಗೀಕರಿಸಲಾಗುತ್ತದೆ ಮತ್ತು ಸುರಕ್ಷಿತವಾಗಿ ಇರಿಸಲಾಗುತ್ತದೆ. ಸೆಕ್ಯೂರಿಟಿಗಳ ಕ್ರಾಸ್ ಹೋಲ್ಡಿಂಗ್ಅನ್ನ ಆರ್‌ಪಿಎಡಿ ಮೂಲಕ ಲಿಖಿತ ರೂಪದಲ್ಲಿ ಸರಿಯಾಗಿ ತಿಳಿಯಪಡಿಸಲಾಗುತ್ತದೆ ಮತ್ತು ಇತರ ಒಪ್ಪಂದಗಳಲ್ಲಿ ಬಾಕಿ ಬಹಿರಂಗಪಡಿಸುವಿಕೆಯ ಉಲ್ಲೇಖವನ್ನು ಸಹ ನೀಡಲಾಗುತ್ತದೆ.

ಸಾಮಾನ್ಯ ಅಂಶಗಳು

 • ಸಾಲಗಾರರೊಂದಿಗೆ ಮಾಡಿಕೊಂಡ ಸಾಲದ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಕಂಪೆನಿಯು ಕಾನೂನುಬದ್ಧವಾಗಿ ಅನುಮತಿಸುವ ಪರಿಹಾರಗಳ ಮೂಲಕ ಮಾತ್ರ ಜವಾಬ್ದಾರಿ / ಕ್ರಮಗಳನ್ನು ತೆಗೆದುಕೊಳ್ಳುತ್ತದೆ.
 • ಹೊಣೆಗಾರಿಕೆಗಳ ವರ್ಗಾವಣೆಗಾಗಿ ಗ್ರಾಹಕರಿಂದ ನೀಡಲಾಗುವ ಲಿಖಿತ ವಿನಂತಿಯನ್ನು ಮಾತ್ರ ಕಂಪೆನಿಯು ಮೌಲ್ಯಮಾಪನ ಮಾಡುತ್ತದೆ ಮತ್ತು ತಕ್ಕಷ್ಟು ಶ್ರಮಶೀಲತೆಯ ನಂತರ 21 ದಿನಗಳೊಳಗೆ ಲಿಖಿತ ದೃಢೀಕರಣ / ನಿರಾಕರಣೆಯನ್ನು ಗ್ರಾಹಕರಿಗೆ ತಿಳಿಯಪಡಿಸಲಾಗುತ್ತದೆ.
 • ಕಾಲಕಾಲಕ್ಕೆ ಹೊರಡಿಸಲಾಗುವ ಕಂಪೆನಿಯ ನೀತಿಗಳ ಪ್ರಕಾರ, ವಿವಿಧ ಚಟುವಟಿಕೆಗಳನ್ನು ಹೊರಗುತ್ತಿಗೆ ನೀಡಿರುವ / ವಹಿಸಿಕೊಟ್ಟಿರುವ ಯಾವುದೇ ಏಜೆನ್ಸಿಯನ್ನು ಪಟ್ಟಿಮಾಡಬೇಕಾಗುತ್ತದೆ ಮತ್ತು ದಾಖಲಿಸಬೇಕಾಗುತ್ತದೆ.
 • ಕಂಪೆನಿಯು ವಿಶೇಷ ವಸೂಲಿ ತಂಡವನ್ನು ಹೊಂದಿದ್ದು, ಈ ತಂಡದವರು ದೇಶದ ಕಾನೂನಿಕ ಪ್ರಕಾರ ಸೂಕ್ತವಾದ ಕಾನೂನುಬದ್ಧ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವ ಮೂಲಕ ವಸೂಲಿ ಚಟುವಟಿಕೆಯನ್ನು ವೃತ್ತಿಪರ ರೀತಿಯಲ್ಲಿ ನಿರ್ವಹಿಸುವುದರಲ್ಲಿ ಪರಿಣತಿ ಹೊಂದಿದ್ದಾರೆ. ಇದು ವಿಶಿಷ್ಟವಾದ ಕಾರ್ಯನಿರ್ವಹಣೆಯಾಗಿರುವುದರಿಂದ, ನೇಮಕಾತಿಯ ಮಟ್ಟದಲ್ಲಿಯೇ ಗುಣಮಟ್ಟವನ್ನು ಪರಿಗಣಿಸಲಾಗುತ್ತದೆ.

ಕುಂದುಕೊರತೆ ನಿವಾರಣಾ ಕಾರ್ಯವಿಧಾನ

ಯಾವುದೇ ದೂರು / ಕುಂದುಕೊರತೆಯ ಸಂದರ್ಭದಲ್ಲಿ ಗ್ರಾಹಕರು ಈ ಕೆಳಗಿನ ಯಾವುದೇ ವಿಧಾನಗಳ ಮೂಲಕ ತಮ್ಮ ದೂರನ್ನು ಸಲ್ಲಿಸಬಹುದು:

 • ವೆಬ್‌ಸೈಟ್
 • ಇಮೇಲ್ ([email protected])
 • ಗ್ರಾಹಕರು ನೇರವಾಗಿ ಶಾಖೆಗೆ ಭೇಟಿ ನೀಡುವಿಕೆ
 • ನೇರ ದೂರವಾಣಿ ಸಂಖ್ಯೆ: 022 6652 6185

ಒಂದು ವೇಳೆ ಗ್ರಾಹಕರು ತಮ್ಮ ದೂರನ್ನು ವೆಬ್‌ಸೈಟ್ ಮತ್ತು ಇಮೇಲ್ ಮೂಲಕ ದಾಖಲಿಸಲು ಆಯ್ಕೆ ಮಾಡಿದಲ್ಲಿ, ಅವರ ದೂರನ್ನು ಸ್ವೀಕರಿಸಿದ ಕುರುಹಾಗಿ ಮತ್ತು ಅವರ ದೂರಿನ ಸಂಖ್ಯೆ ಮತ್ತು ಪರಿಹಾರದ ನಿರೀಕ್ಷಿತ ಸಮಯವನ್ನು ಸಹ ತಿಳಿಯಪಡಿಸಲಿಕ್ಕಾಗಿ ಒಂದು ಇಮೇಲ್ / ಎಸ್‌ಎಂಎಸ್ ಅನ್ನು ಗ್ರಾಹಕರಿಗೆ ಕಳುಹಿಸಲಾಗುತ್ತದೆ.

ಈ ದೂರುಗಳನ್ನು ಮುಂಬೈನಲ್ಲಿರುವ ನಮ್ಮ ಪ್ರಧಾನ ಕಛೇರಿಯಲ್ಲಿ ನೋಡಲ್ ಕಸ್ಟಮರ್ ಕೇರ್ ಎಗ್ಸೆಕ್ಯುಟಿವ್ (ದೂರನ್ನು ಟ್ರ್ಯಾಕಿಂಗ್ ಮಾಡುವಂತಹ ಒಂದು ಮಾಡ್ಯೂಲ್ ಮೂಲಕ) ಅವರು ಪಡೆದುಕೊಳ್ಳುತ್ತಾರೆ. ತದನಂತರ ಈ ದೂರುಗಳನ್ನು ಆಯಾ ಸ್ಥಳಕ್ಕೆ ರೆಫರ್ ಮಾಡಲಾಗುತ್ತದೆ ಮತ್ತು ಪರಿಹಾರಕ್ಕಾಗಿ ಕ್ರಿಯೆಗೈಯಲಾಗುತ್ತದೆ.

ಒಂದು ವೇಳೆ ಗ್ರಾಹಕರು ಶಾಖೆಯಲ್ಲಿ ತಮ್ಮ ದೂರನ್ನು ಸಲ್ಲಿಸಲು ಆಯ್ಕೆ ಮಾಡಿದಲ್ಲಿ, ಅಂತಹ ದೂರನ್ನು ಲಿಖಿತ ರೂಪದಲ್ಲಿ ನೀಡುವಂತೆ ವಿನಂತಿಸಲಾಗುವುದು, ಆಗ ಗ್ರಾಹಕರಿಗೆ ಬರೆಯಲು ಸಾಧ್ಯವಾಗದಿದ್ದರೆ ಶಾಖಾ ಅಕೌಂಟೆಂಟ್ ಅವರು ಗ್ರಾಹಕರ ವಿವರಗಳನ್ನು ಒಂದು ದೂರು ಹಾಳೆಯಲ್ಲಿ ಭರ್ತಿ ಮಾಡಿ, ಗ್ರಾಹಕರ ವಿಶಿಷ್ಟ ದೂರು ಸಂಖ್ಯೆಯನ್ನು ಮತ್ತು ಪರಿಹಾರದ ನಿರೀಕ್ಷಿತ ಸಮಯವನ್ನು ಅವರಿಗೆ ತಿಳಿಯಪಡಿಸುತ್ತಾರೆ. ನೋಡಲ್ ಕಸ್ಟಮರ್ ಕೇರ್ ಎಗ್ಸೆಕ್ಯುಟಿವ್ ಅವರು ಈ ದೂರುಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅಗತ್ಯವಿದ್ದಲ್ಲಿ ಮೇಲಿನ ಅಧಿಕಾರಿಗಳಿಗೆ ಸಮಸ್ಯೆಯನ್ನು ತಿಳಿಯಪಡಿಸಿ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಾರೆ.

ಕಂಪೆನಿಯು ಸ್ವೀಕರಿಸಲಾದ ಎಲ್ಲಾ ದೂರುಗಳನ್ನು ದಾಖಲಿಸಲಾಗಿದೆ ಮತ್ತು ಪರಿಹರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತದೆ ಮಾತ್ರವಲ್ಲದೆ, ಯಾವುದೇ ದೂರುಗಳನ್ನು ಬಗೆಹರಿಸದೇ ಉಳಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದರ ಹೊಣೆಹೊತ್ತಿರುವ ಮೇಲಿನ ಹಂತದ ಅಧಿಕಾರಿಗಳು ಇದನ್ನು ಸಮರ್ಥ ರೀತಿಯಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ / ಎಸ್ಕಲೇಷನ್ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಸಹ ಖಚಿತಪಡಿಸಿಕೊಳ್ಳುತ್ತದೆ.

ಉತ್ಪನ್ನಗಳು ಮತ್ತು ಸೇವೆಗಳ ಸಂಬಂಧದಲ್ಲಿ ಶಾಖೆಗಳು ತೆಗೆದುಕೊಳ್ಳುವ ನಿರ್ಧಾರಗಳಿಂದ ಉದ್ಭವಿಸುವ ಯಾವುದೇ ವಿವಾದಗಳನ್ನು ಕನಿಷ್ಠಪಕ್ಷ ಮುಂದಿನ ಮೇಲಿನ ಹಂತದವರು ಕೇಳಿಸಿಕೊಳ್ಳಬೇಕು ಮತ್ತು ಇತ್ಯರ್ಥಗೊಳಿಸಬೇಕು. ಆದ್ದರಿಂದ, ಈ ಮುಂದಿನ 'ಕುಂದುಕೊರತೆ ನಿವಾರಣಾ ಕಾರ್ಯವಿಧಾನವನ್ನು' ಜಾರಿಗೆ ತರಲಾಗಿದೆ

ದೂರಿನ ಮಟ್ಟ ನಿವಾರಣಾ ಮಟ್ಟ
ಶಾಖೆ ಮಟ್ಟ ಪ್ರಾಂತ್ಯ ಮಟ್ಟ
ಪ್ರಾಂತ್ಯ ಮಟ್ಟ ಪ್ರಾದೇಶಿಕ ಮಟ್ಟ
ಪ್ರಾದೇಶಿಕ ಮಟ್ಟ ವಲಯ ಮಟ್ಟ
ವಲಯ ಮಟ್ಟ ಮುಖ್ಯ ಕಛೇರಿ ಮಟ್ಟ

ದೂರಿನ ಪರಿಹಾರದ ನಂತರ, ದೂರನ್ನು ಪರಿಹರಿಸಲಾಗಿರುವ ದೃಢೀಕರಣವನ್ನು ನೀಡುವ ಒಂದು ಮೇಲ್ / ಎಸ್‌ಎಂಎಸ್ ಅನ್ನು ಗ್ರಾಹಕರಿಗೆ ಕಳುಹಿಸಲಾಗುತ್ತದೆ. ಈ ಹಂತದಲ್ಲಿ ಗ್ರಾಹಕರು ತಮಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ದೂರನ್ನು ಪರಿಹರಿಸಲಾಗಿದೆಯೇ ಇಲ್ಲವೇ ಎಂದು ಖಚಿತವಾಗಿ ತಿಳಿಸಬೇಕು. ಒಂದು ವೇಳೆ ಮೇಲ್ / ಎಸ್‌ಎಂಎಸ್‌ಗೆ ಗ್ರಾಹಕರು ಉತ್ತರ ನೀಡದಿದ್ದರೆ ದೂರನ್ನು ಮುಕ್ತಾಯಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಕಂಪೆನಿಯ ಎಲ್ಲಾ ಶಾಖೆಗಳಲ್ಲಿ ಎದ್ದು ಕಾಣುವಂತಹ ಪ್ರದರ್ಶನ (ಡಿಸ್‌ಪ್ಲೇ) ಬೋರ್ಡುಗಳನ್ನು ಇರಿಸಲಾಗುವುದು, ಅವುಗಳಲ್ಲಿ ಶಾಖೆಯಲ್ಲಿ ದೂರನ್ನು ದಾಖಲಿಸಲು ಮತ್ತು ಪರಿಹರಿಸಲು ಜವಾಬ್ದಾರರಾಗಿರುವ ಕುಂದುಕೊರತೆ ನಿವಾರಣಾ ಅಧಿಕಾರಿಯ [ಹೆಸರು ಮತ್ತು ಸಂಪರ್ಕ ವಿವರಗಳನ್ನು ಸೇರಿಸಿ (ದೂರವಾಣಿ / ಮೊಬೈಲ್ ಸಂಖ್ಯೆಗಳು ಮತ್ತು ಇ-ಮೇಲ್ ವಿಳಾಸವನ್ನೂ ಒಳಗೊಂಡಂತೆ) (ಶಾಖಾ ಅಕೌಂಟೆಂಟ್) ಕುರಿತಾದ ಮಾಹಿತಿಯು ಇರುವುದು. ಅಷ್ಟು ಮಾತ್ರವಲ್ಲ, ಒಂದು ವೇಳೆ ನೀಡಲಾದ ಪರಿಹಾರವು ಸಮರ್ಪಕವಾಗಿಲ್ಲವೆಂದು ಗ್ರಾಹಕರಿಗೆ ಅನಿಸಿದಲ್ಲಿ ಸಮಸ್ಯೆಯನ್ನು ಮೇಲಿನ ಮಟ್ಟಕ್ಕೆ ಹೇಗೆ ತಿಳಿಯಪಡಿಸುವುದು ಎಂಬ ವಿವರವಾದ ಮಾಹಿತಿಯನ್ನು (ಸಂಪರ್ಕ ವಿವರಗಳನ್ನು ಒಳಗೊಂಡಂತೆ) ಸಹ ಅದರಲ್ಲಿ ನಮೂದಿಸಲಾಗುವುದು. ಒಂದು ತಿಂಗಳ ಕಾಲಾವಧಿಯಲ್ಲಿ ದೂರು / ವಿವಾದವನ್ನು ಪರಿಹರಿಸದಿದ್ದರೆ, ಗ್ರಾಹಕರು ಇವರಿಗೆ ಮನವಿ ಮಾಡಬಹುದು:-

ಕ್ರ ಸಂ ಕೇಂದ್ರ ಎನ್‌ಬಿಎಫ್‌ಸಿ ಸಾರ್ವಜನಿಕ ತನಿಕಾಧಿಕಾರಿಯ ಕಛೇರಿಯ ಕೇಂದ್ರ ವಿಳಾಸ ಕಾರ್ಯಾಚರಣೆಯ ಕ್ಷೇತ್ರ
1. ಚೆನ್ನೈ C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಫೋರ್ಟ್ ಗ್ಲೇಸಿಸ್, ಚೆನ್ನೈ 600 001, ಎಸ್‌ಟಿಡಿ ಕೋಡ್: 044, ದೂರವಾಣಿ ಸಂಖ್ಯೆ 25395964, ಫ್ಯಾಕ್ಸ್ ಸಂಖ್ಯೆ 25395488, ಇಮೇಲ್: [email protected] ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶ
2. ಮುಂಬೈ C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಆರ್‌ಬಿಐ ಬೈಕುಲ್ಲಾ ಆಫೀಸ್ ಬಿಲ್ಡಿಂಗ್, ಮುಂಬೈ ಸೆಂಟ್ರಲ್ ರೈಲ್ವೇ ಸ್ಟೇಷನ್ ಎದುರು, ಬೈಕುಲ್ಲಾ, ಮುಂಬೈ--400 008 ಎಸ್‌ಟಿಡಿ ಕೋಡ್: 022 ದೂರವಾಣಿ ಸಂಖ್ಯೆ 2300 1280 ಫ್ಯಾಕ್ಸ್ ಸಂಖ್ಯೆ 23022024 ಇಮೇಲ್: [email protected] ಮಹಾರಾಷ್ಟ್ರ, ಗೋವಾ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಘಡ್, ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಾಗರ್ ಹವೇಲಿ, ದಮನ್ ಮತ್ತು ದಿಯು
3. ನವದೆಹಲಿ C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಂಸದ್ ಮಾರ್ಗ್, ನವದೆಹಲಿ -110001 ಎಸ್‌ಟಿಡಿ ಕೋಡ್: 011 ದೂರವಾಣಿ ಸಂಖ್ಯೆ 23724856 ಫ್ಯಾಕ್ಸ್ ಸಂಖ್ಯೆ 23725218-19 ಇಮೇಲ್: [email protected] ದೆಹಲಿ, ಉತ್ತರ ಪ್ರದೇಶ, ಉತ್ತರಖಂಡ್, ಹರಿಯಾಣ, ಪಂಜಾಬ್, ಚಂಡೀಗಢ ಕೇಂದ್ರಾಡಳಿತ ಪ್ರದೇಶ,ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯ
4. ಕೋಲ್ಕತ್ತಾ C/o ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, 15, ನೇತಾಜಿ ಸುಭಾಷ್ ರಸ್ತೆ, ಕೋಲ್ಕತ್ತಾ-700001 ಎಸ್‌ಟಿಡಿ ಕೋಡ್: 033 ದೂರವಾಣಿ ಸಂಖ್ಯೆ 22304982 ಫ್ಯಾಕ್ಸ್ ಸಂಖ್ಯೆ 22305899 ಇಮೇಲ್: [email protected] ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರ, ಬಿಹಾರ ಮತ್ತು ಜಾರ್ಖಂಡ್

ಗ್ರಾಹಕರ ದೂರು ಪ್ರಕ್ರಿಯೆ ಮತ್ತು ಕುಂದುಕೊರತೆ ನಿವಾರಣಾ ನೀತಿಯನ್ನು ನಿಯಮಿತವಾಗಿ ಪುನಃ ಪರಿಶೀಲನೆ ಮಾಡಲಾಗುತ್ತದೆ.

ಎನ್‌ಬಿಎಫ್‌ಸಿ ಗಳು ವಿಧಿಸುವ ಅತಿಯಾದ ಬಡ್ಡಿಯ ಕುರಿತಾದ ದೂರುಗಳು

ಕಂಪೆನಿಯು ಒಪ್ಪಂದದ ನಿಯಮಗಳ ಪ್ರಕಾರ ಮಾತ್ರ ಬಡ್ಡಿಯನ್ನು ವಿಧಿಸುತ್ತದೆ. ಒಪ್ಪಂದದ ನಿಯಮಗಳನ್ನು ಮಂಜೂರಾತಿ ಪತ್ರದಲ್ಲಿ ಮತ್ತು ಸಾಲದ ಕರಾರಿನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ ಮತ್ತು ಮರುಪಾವತಿ ವೇಳಾಪಟ್ಟಿಯ ಪ್ರಕಾರ ಕಂತುಗಳನ್ನು ಪಾವತಿಸಲು ಯಾವುದೇ ರೀತಿಯ ವಿಳಂಬವಾದಲ್ಲಿ, ವಾಯಿದೆ ದಿನದಿಂದ ಕಂತಿನ ಪಾವತಿ ದಿನದ ವರೆಗೆ ತಿಂಗಳಿಗೆ 3% ದರದಲ್ಲಿ ದಂಡ ಬಡ್ಡಿಯನ್ನು ವಿಧಿಸಲಾಗುತ್ತದೆ. ಕಂತುಗಳ ಪಾವತಿಯನ್ನು ಗ್ರಾಹಕರು ವಿಳಂಬಗೊಳಿಸುವುದನ್ನು ತಪ್ಪಿಸುವ ಸಲುವಾಗಿ ಈ ಬಡ್ಡಿಯ ದರವನ್ನು ನಿಗದಿಪಡಿಸಲಾಗಿದೆ.

ಎನ್‌ಬಿಎಫ್‌ಸಿಗಳು ವಿಧಿಸುವ ಅತಿಯಾದ ಬಡ್ಡಿ ದರಗಳ ನಿಯಂತ್ರಣ

'ಬಡ್ಡಿ ದರ ಮತ್ತು ಅಪಾಯದ ಶ್ರೇಣೀಕರಣ' ಕುರಿತಾದ ನಮ್ಮ ನೀತಿಯನ್ನು ದಯವಿಟ್ಟು ನೋಡಿ

ಫೈನಾನ್ಸ್ ಮಾಡಲಾದ ವಾಹನಗಳ ಮರುಸ್ವಾಧೀನ

ಫೈನಾನ್ಸ್ ಮಾಡಲಾದ ವಾಹನಗಳ ಮರುಸ್ವಾಧೀನಕ್ಕಾಗಿ ಕಂಪೆನಿಯು ಕೆಳಗೆ ವಿವರಿಸಲಾಗಿರುವಂತೆ ಸೂಕ್ತ ಕಾನೂನುಬದ್ಧ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತದೆ

 • ಒಪ್ಪಂದವನ್ನು ಮುಕ್ತಾಯಗೊಳಿಸುತ್ತದೆ
 • ಎಲ್ಲಾ ಎನ್‌ಪಿಎ ಪ್ರಕರಣಗಳಿಗೆ ಸಾಲವನ್ನು ತಕ್ಷಣವೇ ಹಿಂತೆಗೆದುಕೊಳ್ಳುತ್ತದೆ
 • ಮಧ್ಯಸ್ಥಿಕೆ ಉಪವಾಕ್ಯದ ಆಮಂತ್ರಣ ಮತ್ತು ಮಧ್ಯಸ್ಥಗಾರನ ನೇಮಕ
 • ಮಧ್ಯಸ್ಥಗಾರನ ಉಪಸ್ಥಿತಿಯಲ್ಲಿ ವಾಹನದ ಮರುಸ್ವಾಧೀನಕ್ಕೆ ಮಧ್ಯಂತರ ಪರಿಹಾರವನ್ನು ಪಡೆಯಲು ಪ್ರಯತ್ನಿಸುತ್ತಾ, ಒಪ್ಪಂದದ ವಿವರಗಳು, ಇನ್ವಾಯ್ಸ್, ಸೊತ್ತಿನ ವಿವರದ ಜೊತೆಗೆ ಒಂದು ಕೋರಿಕೆಯೊಂದಿಗೆ ಸ್ಟೇಟ್‌ಮೆಂಟ್‌ ಆಫ್ ಕ್ಲೈಮ್ (ಎಸ್.ಒ.ಸಿ.) ಅನ್ನು ದಾಖಲಿಸುವುದು
 • ಮಧ್ಯಸ್ಥಗಾರನು ಪ್ರತ್ಯರ್ಜಿದಾರರಿಗೆ ಎಸ್.ಒ.ಸಿ. ಅನ್ನು ಕಳುಹಿಸಬೇಕು ಮತ್ತು ವಿಚಾರಣೆಯ (ಹಿಯರಿಂಗ್) ದಿನಾಂಕವನ್ನು ತಿಳಿಸಬೇಕು
 • ವಿಚಾರಣೆಗೆ ನಿಗದಿಪಡಿಸಿದ ದಿನಾಂಕದಂದು ಮರುಸ್ವಾಧೀನದ ಮಧ್ಯಂತರ ಪರಿಹಾರಕ್ಕಾಗಿ ಅನುಮತಿಯನ್ನು ಪಡೆಯುವುದು
 • ವಾಹನವನ್ನು ಮರುಸ್ವಾಧೀನಪಡಿಸಿಕೊಳ್ಳಲು ಮಧ್ಯಸ್ಥಗಾರರಿಂದ ಸ್ವೀಕರ್ತನ (ರಿಸೀವರ್) ನೇಮಕ
 • ಮಧ್ಯಂತರ ಆದೇಶವನ್ನು ಪಡೆದ ನಂತರ, ಮರುಸ್ವಾಧೀನ ಆದೇಶದ ಬಗ್ಗೆ ಆದೇಶದ ಒಂದು ಪ್ರತಿಯೊಂದಿಗೆ ಆ ಸ್ಥಳದ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವುದು
 • ಮರುಸ್ವಾಧೀನ ಆದೇಶದೊಂದಿಗೆ ವಾಹನವನ್ನು ಮರುಸ್ವಾಧೀನಪಡಿಸಿಕೊಳ್ಳುವುದು

ಸಂಪರ್ಕದಲ್ಲಿರಲು

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್
4 ನೇ ಮಹಡಿ, ಮಹಿಂದ್ರಾ ಟವರ್ಸ್,
ಡಾ.ಜಿ.ಎಂ. ಭೋಸಲೆ ಮಾರ್ಗ,
ಪಿ.ಕೆ. ಕುರ್ನೆ ಚೌಕ್, ವರ್ಲಿ,
ಮುಂಬೈ 400 018.

ಇಲ್ಲಿ ಕ್ಲಿಕ್ ಮಾಡಿ ನಿಮಗೆ ಹತ್ತಿರವಿರುವ ಮಹಿಂದ್ರಾ ಫೈನಾನ್ಸ್ ಶಾಖೆಯನ್ನು ಕಂಡುಕೊಳ್ಳಿ

Calculate Your EMI

 • Diverse loan offerings
 • Less documenation
 • Quick processing
Loan Amount
Tenure In Months
Rate of Interest %
Principal: 75 %
Interest Payable: 25 %

For illustration purpose only

Total Amount Payable

50000